Текст песни Shreya Ghoshal - Mandhaarave (From ''Chaithrada Chandrama'') (Shreya Ghoshal - Soothing - Kannada Hits (2016)) ಪ್ರಸನ್ನ ವದನಾಮ್ ಸೌಭಾಗ್ಯದಾಮ್ ಭಾಗ್ಯದಾಮ್
ಹಸ್ತಾಭ್ಯಾಮ್ ಅಭಯಪ್ರದಂ ಮಣಿಗಣೈರ್ ನಾನಾವಿಧಿರ್ ಭೂಷಿತಾಂ
ಮಂದಾರವೇ ಅರಳುತಿದೆ
ಚಿತ್ತಾರವ ಬರೆಯುತಿದೆ
ಮಂದಾರವೇ ಅರಳುತಿದೆ
ಚಿತ್ತಾರವ ಬರೆಯುತಿದೆ
ಚಿಗುರೊಡೆದ ಹೃದಯದಲಿ ಉದಯಿಸಿದೆ ಅದು ಏನು
ಅರಿಯದೆ ಹೋದೆನು ನಾ
ಮಂದಾರವೇ ಅರಳುತಿದೆ
ಚಿತ್ತರವ ಬರೆಯುತಿದೆ
(ಪಗರಿಗ ಸರಿದ ಸಾಪ
ಪಗರಿಗ ಮರಿಸ ನಿಸ)
ನನ್ನ ಮನ ಹಕ್ಕಿಯಂತೆ ಹಾರುತಿದೆ
ಸಂತಸದ ಅಮಲಿನಲಿ
ಜಿಂಕೆ ಅಂತೆ ಏಕೋ ಇಂದು ಕುಣಿಯುತಿದೆ
ಉಲ್ಲಾಸದ ಚಿಲುಮೆಯಲಿ
ಇದೇನಿದು ವೈಯ್ಯಾರವು
ನನ್ನ ತುಂಬಾ ತುಂಟಾಟವು
ಕನಸುಗಳ ಬಾಚಿಕೊಳ್ಳುವೆ
ಆಸೆಗಳ ಆಪ್ಪಿಕೊಳ್ಳುವೆ
ಮುಗಿಲಲೇ ನಾ ನಡೆವೆ
ಮಂದಾರವೇ ಅರಳುತಿದೆ
ಚಿತ್ತಾರವ ಬರೆಯುತಿದೆ
ಕೆನ್ನೆಗೊಂದು ಆಸೆ ಬಂದರೇನು ಚಂದವು
ಅವಳಿಗಿಂತ ಯಾರು ಅಂದವು
ಕನಸುಗಳ ಬಾಗಿಲಲ್ಲಿ ನಿಂತುಕೊಂಡರೆ
ನಾಚಿಕೆಯೇ ಅವಳಿಗಂದವು
ದಿನಾ ದಿನಾ ನಿನ್ನ ಜೊತೆ
ನನ್ನ ನಿನ್ನ ಹೊಸ ಕಥೆ
ತಿಳಿಸಿದೆಯಾ ಕಲಿಸಿದೆಯಾ ಹೆಣ್ಮನವ ತುಂಬಿದೆಯಾ
ಪುಳಕಿತಳಾದೆನು ನಾ
ಮಂದಾರವೇ ಅರಳುತಿದೆ
ಚಿತ್ತಾರವ ಬರೆಯುತಿದೆ
ಮಂದಾರವೇ ಅರಳುತಿದೆ
ಚಿತ್ತಾರವ ಬರೆಯುತಿದೆ
ಚಿಗುರೊಡೆದ ಹೃದಯದಲಿ ಉದಯಿಸಿದೆ ಅದು ಏನು
ಅರಿಯದೆ ಹೋದೆನು ನಾ
ಮಂದಾರವೇ ಅರಳುತಿದೆ
ಚಿತ್ತರವ ಬರೆಯುತಿದೆ Закрыть текст