Yenu Helabeku (From ''Maleyali Jotheyali'') (Shreya Ghoshal Super Hit Songs 2018)
Shreya Ghoshal and Sonu NigamИсполнитель
Песня Yenu Helabeku (From ''Maleyali Jotheyali'') (Shreya Ghoshal Super Hit Songs 2018) в исполнении Shreya Ghoshal and Sonu Nigam - слушать онлайн в хорошем качестве или скачать трек в Mp3 бесплатно на ПК или телефон.
Текст песни Shreya Ghoshal and Sonu Nigam - Yenu Helabeku (From ''Maleyali Jotheyali'') (Shreya Ghoshal Super Hit Songs 2018)
ಏನು ಹೇಳಬೇಕು ಅಂದೆ ಏನದು?
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ಇನ್ನು ಕಾದು
ಮನಸಿನ ಪರಿಚಯ
ಕನಿಸಿನ ವಿನಿಮಯ
ಮೆಲ್ಲಗೇ ನಡೆದಿದೆ ಕಾಣಲಾರೆಯಾ?
ನಾ ನೋಡು ಹೀಗಾದೆ, ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ, ನಾನಂತೂ ನಿರುಪಾಯ
ಹೆಚ್ಚು ಕಡಿಮೆ ನಾನೀಗ ಹುಚ್ಚನಾಗಿ ಹೋದಂತೆ ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು ಇಷ್ಟ ಬಂದ ಹಾಗೆ ನನ್ನ
ಈಗ ಮೂಡಿದ ಪ್ರೇಮಗೀತೆಗೆ, ನೀನೆ ಸುಂದರ ಶೀರ್ಷಿಕೆ ಆದೆಯಾ
ನನ್ನೆಲ್ಲ ಭಾವಗಳು ನಿನಗೆಂದೇ ಉಳಿತಾಯ
ಅದ ನೀನೆ ದೋಚಿದರೆ, ನಾನಂತೂ ನಿರುಪಾಯ
ಏನು ಹೇಳಬೇಕು ಅಂದೆ ಏನದು?
ಬೇಗ ಹೇಳು ಯಾರು ಕೇಳಬಾರದು
ಸಾಕಾಯಿತು ನಿನ್ನ ಕಾದು
(ओह माजी माजीरे
ओह माजी माजीरे)
ಅಂದ ಹಾಗೆ ಹೀಗೆಲ್ಲಾ, ಎಂದೂ ಕೂಡ ನನ್ನಲ್ಲಿ ಅಂದುಕೊಂಡೆ ಇಲ್ಲ ನಾನೂ
ಸನ್ನೆಯಲ್ಲಿ ಏನೇನೋ ಅನ್ನುವಾಗ ನೀನೆ, ಇನ್ನು ಇಲ್ಲ ಬಾಕಿ ಏನೂ
ನಿನ್ನ ಕಣ್ಣಿನಾ ಮಿಂಚು ಕಲಿಸಿದೇ, ಸೀದಾ ಜೀವಕೆ ನಾಟುವ ಭಾಷೆಯಾ
ದಿನ ರಾತ್ರಿ ನನಗೀಗ ಕನಸಲ್ಲೇ ವ್ಯವಸಾಯ
ದಿನಗೂಲಿ ನೀಡುವೆಯಾ ನಾನಂತೂ ನಿರುಪಾಯ
ಮಾತಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ
ಮಾತಾಡಲಿ ನನ್ನ ಮೌನ
ಮನಸಿನ ಪರಿಚಯ
ಕನಸಿನ ವಿನಿಮಯ
ಮೆಲ್ಲಗೇ ನಡೆದಿದೆ ನೀನು ಕಾಣೆಯಾ?
ನಾ ನೋಡು ಹೀಗಾದೆ, ನೀ ಬಂದ ತರುವಾಯ
ನೀ ಹೀಗೆ ಕಾಡಿದರೆ, ನಾನಂತೂ ನಿರುಪಾಯ