Текст песни Karthik - Kannalle (From “Sharp Shooter”)
ಕಣ್ಣಲ್ಲೇ ಎಲ್ಲಿ ತನಕ ಅಬ್ಬಬ್ಬಾ ಹೀಗೆ ಕಳ್ಳಾಟ ಆಡುವುದು?
ಗಾಳಿಲಿ ಮುತ್ತನಿಡುವ ಈ ಮಕ್ಕಳಾಟ ಯಾವತ್ತು ಮುಗಿಯುವುದು?
ಮುಂದುವರಿ ಸ್ವಲ್ಪ, ಓ, ಒಲವೇ
ನಿನ್ನ ಜೊತೆ ಸದಾ ನಾ ಇರುವೆ
ಹೋ, ಕಣ್ಣಲ್ಲೇ ಎಲ್ಲಿ ತನಕ ಅಬ್ಬಬ್ಬಾ ಹೀಗೆ ಕಳ್ಳಾಟ ಆಡುವುದು?
ನಿಂತಿರುವೆ ತುದಿಗಾಲಲ್ಲಿ, ಬಂಧಿಸು ಬಾ ನಿನ್ನ ತೋಳಲ್ಲಿ
ಪ್ರಣಯದ ಪರಿಚಯ ಆಗಲಿ
ತಲ್ಲೀನ ನಾನು ನಿನ್ನಲ್ಲಿ, ಉಳಿಗಾಲ ಈಗ ಇನ್ನೆಲ್ಲಿ?
ಸಹಿಸೆನು ವಿರಹದ ಹಾವಳಿ
ಅದಲು ಬದಲು ಎರಡು ಹೃದಯ
ಮರೆತೇ ಹೋಯ್ತು ಹಾಳು ವಿನಯ
ಕಣ್ಣಲ್ಲೇ ಎಲ್ಲಿ ತನಕ ಅಬ್ಬಬ್ಬಾ ಹೀಗೆ ಕಳ್ಳಾಟ ಆಡುವುದು?
ಹೆಚ್ಚಾಗಿ ನಿನ್ನ ಸಹವಾಸ, ಕನಸಲ್ಲೇ ಬಾಳೋ ಹವ್ಯಾಸ
ಪ್ರತಿಕ್ಷಣ ನಿನ್ನದೇ ಯೋಚನೆ
ಹೋ, ನನ್ನಲ್ಲೂ ಇಂಥ ವ್ಯತ್ಯಾಸ, ನೆನಪಿಲ್ಲ ನನ್ನ ಇತಿಹಾಸ
ಒಲವಿದು ಬೆಳೆದಿರೋ ಸೂಚನೆ
ಬಿಡುವೆ ಕೊಡಲು ಹುಚ್ಚು ಹರೆಯ
ಒಳಗೂ ಹೊರಗೂ ಪ್ರೀತಿ ವಿಷಯ
ಕಣ್ಣಲ್ಲೇ ಎಲ್ಲಿ ತನಕ ಅಬ್ಬಬ್ಬಾ ಹೀಗೆ ಕಳ್ಳಾಟ ಆಡುವುದು?
ಗಾಳಿಲಿ ಮುತ್ತನಿಡುವ ಈ ಮಕ್ಕಳಾಟ ಯಾವತ್ತು ಮುಗಿಯುವುದು?