ಮಳೆಯಲಿ ಮಿಂದ ಹೂವಿನ ಹಾಗೆ
ಮಿನುಗುವೆ ಏಕೆ ನನ್ನೊಲವೆ
ಕನಸಲಿ ಕಂಡ ದೇವರ ಹಾಗೆ
ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರಾ ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ ಜೊತೆಯಲಿ ಜೀವವೇ ನೀನಿರಲು
ಮಳೆಯಲಿ ಮಿಂದ ಹೂವಿನ ಹಾಗೆ ಮಿನುಗುವೆ ಏಕೆ ನನ್ನೊಲವೆ
ನಿನ್ನಯ ರೂಪದ ರೇಖೆಯಲಿ ಉಸಿರಿನ ಬಣ್ಣ ತುಂಬುವೆನು
ನನ್ನನ್ನು ನಾನೇ ನಂಬದೆಯೇ ಕೇವಲ ನಿನ್ನನೇ ನಂಬುವೆನು
ನಗೆ ಹೂವನು ಮುಡಿಸುತ ಈ ಕ್ಷಣವೇ
ಶುರುವಾಗಿಯೇ ಹೋಯಿತು ಜೀವನವೇ
ನೀನಿರೋ ತನಕ ನಾನಿರುವೆ (ನಾನಿರುವೆ)
ಮಳೆಯಲಿ ಮಿಂದ ಹೂವಿನ ಹಾಗೆ ಮಿನುಗುವೆ ಏಕೆ ನನ್ನೊಲವೆ
ಗಮಪನಿಸಾ ನಿಸಾ ನಿಸಾ ನಿಸಾ ನಿಸಾನಿಸಗರಿಸ ನಿದಪಮಗರಿ ಗಮಪನಿ
ಸಾನಿದಪ ದಾಪಮಗ ರಿಗಮಪ ಮಗ
ಮೈಮನದಲ್ಲಿ ಸಡಗರವ ಬಚ್ಚಿಡಲಾಗದೆ ಸೋತಿರುವೆ
ನಿನ್ನಯ ಹಾಡಿನ ಸಾಲಿನಲ್ಲಿ ಅಚ್ಚರಿಯಿಂದಲೇ ಕೂತಿರುವೆ
ನಿನ ರೂಪವ ತಾಳುತ ಈ ಜಗವು
ಅಪರೂಪದ ಸುಂದರ ಸೋಜಿಗವು
ನೀನಿರುವಲ್ಲೇ ನಾನಿರುವೆ
ಮಳೆಯಲಿ ಮಿಂದ ಹೂವಿನ ಹಾಗೆ ಮಿನುಗುವೆ ಏಕೆ ನನ್ನೊಲವೆ
ಕನಸಲ್ಲಿ ಕಂಡ ದೇವರ ಹಾಗೆ ಸೆಳೆಯುವೆ ಏಕೆ ನನ್ನೊಲವೆ
ಹೃದಯದ ಮಾತು ಆಲಿಸು ಪೂರಾ ಕಂಪಿಸುವಾಗ ಈ ಕೊರಳು
ಚಿಂತೆಯು ಕೂಡ ನಿಂತಿದೆ ದೂರ
ಜೊತೆಯಲಿ ಜೀವವೇ ನೀನಿರಲು